ಅಭ್ಯಾಸ ಪಾಠಗಳು

	ಮಕ್ಕಳು ತಾವು ಹೊಸದಾಗಿ ಕಲಿತ ವಿಷಯಗಳನ್ನೂ ಕೌಶಲಗಳನ್ನೂ ಪುನರಾವರ್ತಿಸಿಕೊಂಡು ದೃಢಪಡಿಸಿಕೊಳ್ಳಲು ಶಿಕ್ಷಕರು ಕಲ್ಪಿಸುವ ಅವಕಾಶಗಳು (ಎಕ್ಸರ್‍ಸೈಸಸ್). ಹೇಳಿಕೊಟ್ಟ ಮಾದರಿ ಪಾಠಗಳಂತಿದ್ದು, ಅದಕ್ಕೆ ಹತ್ತಿರದ ಸಂಬಂಧಗಳನ್ನುಳ್ಳ ಇತರ ವಿಷಯಗಳನ್ನೂ ಒಳಗೊಂಡ ಪ್ರಶ್ನಾವಳಿಯನ್ನು ಮಕ್ಕಳೆದುರು ಇಟ್ಟು ಅವನ್ನು ಬಿಡಿಸಲು ಹೇಳುವುದರಿಂದ ಕಲಿತ ಪಾಠ ನೆನಪಿಗೆ ನಿಲ್ಲುತ್ತದಲ್ಲದೆ ಮಕ್ಕಳ ಬುದ್ಧಿ ಕೌಶಲ ಹೆಚ್ಚುತ್ತದೆ. ಅಭ್ಯಾಸ ಪ್ರಶ್ನಾವಳಿ ಹೊಸದಾಗಿ ಕಲಿತ ವಿಷಯಗಳಿಗೆ ಸಂಬಂಧಿಸಿರಬೇಕು ಮತ್ತು ಮಕ್ಕಳ ಶಕ್ತಿಗೆ ಮೀರಿರಬಾರದು.									
(ಎಂ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ